Tuesday, December 28, 2010

ಏನು ಹೇಳಬೇಕು ಅಂದೆ ಏನದು?


ಚಿತ್ರ : ಮಳೆಯಲಿ ಜೊತೆಯಲಿ
ವರ್ಷ : 2009
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ವಿ. ಹರಿಕೃಷ್ಣ
ಗಾಯಕರು : ಸೋನು ನಿಗಮ್, ಶ್ರೇಯಾ ಘೋಷಾಲ್
*****
ಏನು ಹೇಳಬೇಕು ಅಂದೆ ಏನದು
ಬೇಗ ಹೇಳು ಯಾರು ಕೇಳಬಾರದು
ಸಾಕಯಿತು ಇನ್ನು ಕಾದು
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌
ಹೆಚ್ಚು ಕಡಿಮೆ ನಾನೀಗ, ಹುಚ್ಚನಾಗಿ ಹೋದಂತೆ
ಹಚ್ಚಿಕೊಂಡ ಮೇಲೆ ನಿನ್ನ
ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು
ಇಷ್ಟಬಂದ ಹಾಗೆ ನನ್ನ
ಓ.... ಈಗ ಮೂಡಿದ ಪ್ರೇಮಗೀತೆಗೆ
ನೀನೆ ಸುಂದರ ಶೀರ್ಷಿಕೆ ಆದೆಯ‌
ನನ್ನೆಲ್ಲ ಭಾವಗಳು ನಿನಗೆಂದೆ ಉಳಿತಾಯ‌
ಅದ ನೀನೆ ದೋಚಿದರೆ, ನಾನಂತು ನಿರುಪಾಯ || ಏನು ಹೇಳಬೇಕು ||
ಅಂದಹಾಗೆ ಹೀಗೆಲ್ಲಾ ಎಂದು ಕೂಡ ನನ್ನಲ್ಲಿ
ಅಂದುಕೊಂಡೆ ಇಲ್ಲ ನಾನು...
ಸನ್ನೆಯಲ್ಲೆ ಏನೇನೋ ಅನ್ನುವಾಗ ನೀನೆ
ಇನ್ನು ಇಲ್ಲ ಬಾಕಿ ಏನು...
ನಿನ್ನ ಕಣ್ಣಿನ ಮಿಂಚೆ ಕಲಿಸಿದೆ
ಸೀದ ಜೀವಕೆ ನಾಟುವ ಭಾಷೆಯ..
ದಿನರಾತ್ರಿ ನನಗೀಗ ಕನಸಲ್ಲೆ ವ್ಯವಸಾಯ‌
ದಿನಗೂಲಿ ನೀಡುವೆಯ, ನಾನಂತು ನಿರುಪಾಯ... || ಏನು ಹೇಳಬೇಕು ||
ಮಾತನಾಡಬೇಡ ನೀನು ಈ ಕ್ಷಣ
ಪ್ರೀತಿಯಲ್ಲಿ ಬೀಳುವಾಗ ಈ ಮನ‌
ಮಾತಾಡಲಿ ನನ್ನ ಮೌನ...
ಮನಸಿನ ಪರಿಚಯ, ಕನಸಿನ ವಿನಿಮಯ‌
ಮೆಲ್ಲಗೆ ನಡೆದಿದೆ, ಕಾಣಲಾರೆಯ...
ನಾ ನೋಡು ಹೇಗಾದೆ, ನೀ ಬಂದ ತರುವಾಯ‌
ನೀ ಹೀಗೆ ಕಾಡಿದರೆ, ನಾನಂತು ನಿರುಪಾಯ‌..

No comments:

Post a Comment